ನ್ಯೂಟನ್ ನ ಚಲನೆಯ ಎರಡನೇ ನಿಯವದ ಪ್ರಮಾಣೀಕರಣ

Home/Videos/Kannada Videos/Physics Videos/ನ್ಯೂಟನ್ ನ ಚಲನೆಯ ಎರಡನೇ ನಿಯವದ ಪ್ರಮಾಣೀಕರಣ

ನ್ಯೂಟನ್ ನ ಚಲನೆಯ ಎರಡನೇ ನಿಯವದ ಪ್ರಮಾಣೀಕರಣ

ನ್ಯೂಟನ್ ನ ಎರಡನೆಯ ನಿಯಮದ ಪ್ರಕಾರ”ಕಾಯದ ಸಂವೇಗದ ಬದಲಾವಣೆಯ ದರವು ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಬಲ ಪ್ರಯೋಗವಾದ ದಿಕ್ಕಿನಲ್ಲಿರುತ್ತದೆ.

Kindly register to read the book. Thank you.!

Description

ನ್ಯೂಟನ್ ನ ಎರಡನೆಯ ನಿಯಮದ ಪರಿಶೀಲನೆ

ನ್ಯೂಟನ್ ನ ಎರಡನೆಯ ನಿಯಮವನ್ನು ವ್ಯಾಖ್ಯಾನಿಸಿ:

ನ್ಯೂಟನ್ ನ ಎರಡನೆಯ ನಿಯಮದ ಪ್ರಕಾರ”ಕಾಯದ ಸಂವೇಗದ ಬದಲಾವಣೆಯ ದರವು ಪ್ರಯೋಗವಾದ ಬಲಕ್ಕೆ ನೇರ ಅನುಪಾತದಲ್ಲಿಯೂ ಬಲ ಪ್ರಯೋಗವಾದ ದಿಕ್ಕಿನಲ್ಲಿರುತ್ತದೆ.

F=ma

ಇಲ್ಲಿ F ಎನ್ನುವುದು ಫಲಿತ ಬಲವಾಗಿದೆ. m –ಕಾಯದ ದ್ರವ್ಯರಾಶಿ ಮತ್ತು a –ಕಾಯದ ವೇಗೋತ್ಕರ್ಷವಾಗಿದೆ.

ಏಕಕಾಲದಲ್ಲಿ ಆನೇಕ ಬಲಗಳು ಒಂದು ಕಾಯದ ಮೇಲೆ ಪ್ರಯೋಗವಾದಾಗ ಏನಾಗುತ್ತದೆ?

ಏಕಕಾಲದಲ್ಲಿ ಒಂದು ಕಾಯದ ಮೇಲೆ ಆನೇಕ ಬಲಗಳ ಪ್ರಯೋಗವಾದಾಗ ಅದು ಪ್ರತ್ಯೇಕ ಬಲಗಳ ಅದಿಶ ಪರಿಮಾಣಗಳ ಮೊತ್ತಕ್ಕೆ ನೇರ ಅನುಪಾತದಲ್ಲಿರುತ್ತದೆ.(ಅಂದರೆ ಬಲಗಳ ಮೊತ್ತ)

ನ್ಯೂಟನ್ ನ ಚಲನೆಯ ಎರಡನೆಯ ನಿಯಮವನ್ನು ಈ ರೀತಿಯಾಗಿಯೂ ಸಹ ಪ್ರತಿನಿಧಿಸಬಹುದಾಗಿದೆ.

ಇಲ್ಲಿ ಕಾಯದ ಸಂವೇಗವನ್ನು m ಆಗಿದೆ.

ಆದ್ದರಿಂದ ನ್ಯೂಟನ್ ನ ಚಲನೆಯ ಎರಡನೆಯ ನಿಯಮದ ಪ್ರಕಾರ “ಒಂದು ಕಾಯದ ಮೇಲೆ ಪ್ರಯೋಗವಾದ ಫಲಿತ ಬಲವು ಅದರ ಸಂವೇಗದಲ್ಲಿ ಆದ ಬದಲಾವಣೆಯ ದರಕ್ಕೆ ಸಮವಾಗಿರುತ್ತದೆ.

ಫಲಿತ ಬಲದ ಮೇಲೆ ಸಂವೇಗವು ಹೇಗೆ ಪ್ರಭಾವವನ್ನು ಬೀರುತ್ತದೆ?

ನ್ಯೂಟನ್ ನ ಚಲನೆಯ ಮೊದಲನೆಯ ನಿಯಮದ ಪ್ರಕಾರ “ಯಾವುದೇ ಕಾಯವನ್ನು ವೇಗೋತ್ಕರ್ಷಗೊಳಿಸಲು ಹೊರಗಿನ ಅಸಂತುಲಿತ ಬಲದ ಅವಶ್ಯಕತೆ ಇದೆ.ಈಗ ವೇಗೋತ್ಕರ್ಷವು ಬಲದ ಮೇಲೆ ಹೇಗೆ ಅವಲಂಭಿಸಿದೆ ಎಂದು ತಿಳಿಯೋಣ.ಉದಾಹರಣೆಗೆ ರಸ್ತೆಯ ಬದಿಯಲ್ಲಿ ನಿಂತಿರುವ ಕಾರು ಹೆಚ್ಚು ಗಮನವನ್ನು ಸೆಳೆಯುವುದಿಲ್ಲ.ಆದರೆ ಚಲಿಸುತ್ತಿರುವ ಕಾರು ಅದು ನಿಧಾನವಾಗಿ ಚಲಿಸುತ್ತಿರುವ ಕಾರು ಸಹ ತನ್ನ ಪಥದಲ್ಲಿ ನಿಂತಿರುವ ವ್ಯಕ್ತಿಯನ್ನು ಸಾಯಿಸಬಹುದು.ಒಂದು ಬಂದೂಕಿನಿಂದ ಹೊರಟ ಕಡಿಮೆ ದ್ರವ್ಯರಾಶಿ ಹೊಂದಿರುವ ಗುಂಡು ಸಹ ವ್ಯಕ್ತಿಯನ್ನು ಕೊಲ್ಲಬಹುದು.ಈ ಉದಾಹರಣೆಗಳಿಂದ ಫಲಿತ ಬಲವು ಕಾಯದ ದ್ರವ್ಯರಾಶಿ ಮತ್ತು ವೇಗವನ್ನು ಅವಲಂಭಿಸಿದೆ.

ಒಂದು ಕಾಯದ ದ್ರವ್ಯರಾಶಿ ಮತ್ತು ವೇಗವನ್ನು ಒಟ್ಟುಗೂಡಿಸಿದಾಗ ದೊರೆಯುವ ಪ್ರಮಾಣವನ್ನು ಸಂವೇಗ ಎನ್ನವರು.ಇದನ್ನು ನ್ಯೂಟನ್ ರವರು ಪರಿಚಯಿಸಿದರು.

ಸಂವೇಗದ ವ್ಯಾಖ್ಯಾನ:

ಸಂವೇಗವು ದಿಕ್ಕು ಮತ್ತು ಪರಿಮಾಣ ಎರಡನ್ನು ಹೊಂದಿದೆ.ಕಾಯದ ವೇಗದ ದಿಕ್ಕೇ ಸಂವೇಗದ ದಿಕ್ಕಾಗಿರುತ್ತದೆ.

ಕಾಯದ ಮೇಲೆ ಅಸಮತುಲಿತ ಬಲ ಪ್ರಯೋಗವಾದಾಗ,ಕಾಯದ ವೇಗ ಬದಲಾಗುತ್ತದೆ, ಇದರೊಂದಿಗೆ ಸಂವೇಗವು ಬದಲಾಗುತ್ತದೆ.ಆದ್ದರಿಂದ ಕಾಯದ ಸಂವೇಗದ ಬದಲಾವಣೆಯ ಅವಶ್ಯಕತೆ ಇದೆ ಹಾಗು ಕಾಲವನ್ನು ಅವಲಂಭಿಸಿದೆ.

ಕಲಿವಿನ ಫಲ:

ವಿದ್ಯಾರ್ಥಿಯು ಈಕೆಳಗಿನ ಅಂಶಗಳನ್ನು ಅರಿಯುತ್ತಾನೆ.

1.ದ್ರವ್ಯರಾಶಿ

2.ವೇಗೋತ್ಕರ್ಷ

3.ಬಲ

4.ಸಂವೇಗ

5.ನ್ಯೂಟನ್ ನ ಚಲನೆಯ ಎರಡನೆಯ ನಿಯಮ

ಈ ಸರಳ ಪ್ರಯೋಗದಿಂದ ನ್ಯೂಟನ್ ನ ಚಲನೆಯ ಎರಡನೆಯ ನಿಯಮವನ್ನು ತಿಳಿದುಕೊಳ್ಳೋಣ.

Additional information

Author

Language

Publisher

Year

Reviews

There are no reviews yet.

Be the first to review “ನ್ಯೂಟನ್ ನ ಚಲನೆಯ ಎರಡನೇ ನಿಯವದ ಪ್ರಮಾಣೀಕರಣ”

Go to Top